
| ಗುರುವನ್ನೆ ನೋಡಿದೆವು |
|
|
ರಾಗ: ತಾಳ: ಪಲ್ಲವಿ: ಗುರುವನ್ನೆ ನೋಡಿದೆವು ನಾವು ಗುರುವನ್ನೆ ನೋಡಿದೆವು ಚರಣ: ನೂರಾರುಜನರು ತೆಗಳೆದರೇನು ಗುರುವನ್ನೆ ನೋಡಿದೆವು ನಿಂದನೆಮಾಡಿದರೆ ನಮಗೆ ಬಂಧನವೇನಿಲ್ಲ ಸಂದರ್ಶನವಿಲ್ಲ ... ಗುರುವನ್ನೆ ತಿರುಗಿ ತಿರುಗಿ ನಾವು ಗುರುವೆ ಬಳಲಿಬಂದೆವಿಲ್ಲಿ ಕರುಣೆಯತೋರಿ ಕಾಪಾಡು ಗುರುವೆ ಭವಭಯಹರ ಗುರುವೆ ... ಗುರುವನ್ನೆ ಪರಮಭಕ್ತಿಯಿಂದ ಗುರುವೆ ಪರಿಪರಿವಿಧದಲ್ಲಿ ವರಗುರು ನಿಮ್ಮ ಚರಣವ ಪೂಜಿಸಿ ಅನುದಿನ ಪಾಡುವೆವು ... ಗುರುವನ್ನೆ ನಂಬಿದರೆ ಗುರುವು ನಿಮಗೆ ಬೆಂಬಿಡದೆ ಕಾಯ್ವ ನಂಬದ ಜನರಿಗೆ ಗುರುವಿನ ಅನುಗ್ರಹವೆಂಬುವುದೇ ಇಲ್ಲ ... ಗುರುವನ್ನೆ ಸಚ್ಚಿದಾನಂದ ಶ್ರೀ ಸದ್ಗುರು ನಿತ್ಯದಿ ಕಾಯುವರು ಸತ್ಯದಿ ನಂಬಿದ ಭಕ್ತರಿಗೆಲ್ಲ ಮುಕ್ತಿಯ ನೀಡುವರು ... ಗುರುವನ್ನೆ |